ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಪರಿಹರಿಸಲು ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತನ್ನ ಗ್ರಾಹಕರಿಗಾಗಿ ಟೋಲ್ ಫ್ರೀ ನಂಬರ್ ಅನ್ನು ಪರಿಚಯಿಸುತ್ತಿದೆ. ವಿದ್ಯುತ್ ಕಡಿತಗೊಂಡ ಬಗ್ಗೆ, ವಿದ್ಯುತ್ ವೈಯರ್ ಗೆ ಗಿಡಗಂಟಿ ತಾಗುತ್ತಿದ್ದರೆ ಹಾಗೂ ಇನ್ನಿತರ ಎಲ್ಲ ಸಮಸ್ಯೆಗಳನ್ನು ನೀವು ಟೋಲ್ ಫ್ರೀ ನಂಬರ್ 1-800-425-1033 ಗೆ ಕರೆ ಮಾಡುವುದರ ಮೂಲಕ ಪರಿಹರಿಸಿಕೊಳ್ಳಬಹುದು.
ಇದು ದಿನದ 24 ಗಂಟೆಯೂ ಲಭ್ಯವಿದ್ದು ವಿದ್ಯುತ್ ಸಂಬಂಧಿತ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸುತ್ತಿದೆ. ನಿಮ್ಮ ಮೊಬೈಲ್ ನಲ್ಲಿ ಕೂಡಲೇ ಈ ಟೋಲ್ ಫ್ರೀ ನಂಬರನ್ನು ಸೇವ್ ಮಾಡಿಕೊಂಡು ಅಗತ್ಯ ಬಿದ್ದಾಗ ಆ ನಂಬರ್ಗೆ ಕರೆ ಮಾಡಬಹುದು.
